ನಾವು ಪ್ರಯಾಣ ಮಾಡುವಾಗ ಅನೇಕ ಬಾರಿ ಕಿಟಕಿಯ ಬಳಿ ಸೀಟನ್ನು ಆಯ್ಕೆ ಮಾಡುತ್ತೇವೆ, ಅರ್ಥ ಇಷ್ಟೇ ಪ್ರಕೃತಿಯ ಸೊಬಗು ಮತ್ತು ರಮಣೀಯತೆ ಹಾಗು ಅದರ ಸೌಂದರ್ಯವನ್ನು ಸವಿಯಲೆಂದು, ನೋಡಿದಷ್ಟು ಮತ್ತೆ ನೋಡಬೇಕೆನ್ನುವ ಹಂಬಲ, ಬಹುಶ: ಇದೆ ಇರಬೇಕು ಎಲ್ಲರಲ್ಲೂ ವಿವಿದ ಹವ್ಯಾಸಗಳನ್ನು ಮೂಡಿಸುವುದು, ಆ ಹವ್ಯಾಸವೇ ಬಲಿತು ಸೂಕ್ಷ್ಮ ವಿಚಾರಗಳನ್ನು ಬರವಣಿಗೆ ಮೂಲಕ ನೋಡುಗರಿಗೆ, ಓದುಗರಿಗೆ ತಲುಪಿಸುವುದು, ನಿಜವೆಂದರೆ ಆ ಎಲ್ಲ ಸೌಂದರ್ಯವನ್ನು ಸೆರೆಹಿಡಿಯಲು ಕ್ಯಾಮೆರಾ ಒಂದು ಅತ್ಯುತ್ತಮ ಸಾದನ, ಕರ್ನಾಟಕ ಅನೇಕ ನದಿಗಳಿಗೆ ಜನ್ಮ ನೀಡಿದ ರಾಜ್ಯ, ಹಾಗೆ ಅನೇಕ ನದಿಗಳು ನಮ್ಮ ರಾಜ್ಯವನ್ನು ಹಾದುಹೋಗುತ್ತವೆ, ಹಾದು ಹೋಗುವ ಹಾದಿಯಲ್ಲಿ ಹಚ್ಚ ಹಸುರಿನ ಬೆಳೆಯನ್ನು ತಂದು ಸುತ್ತಲ ಪ್ರದೇಶವನ್ನು ಜಲಾನಯನ ಭೂಮಿಯನ್ನಾಗಿ ಮಾಡುತ್ತದೆ. ನಮ್ಮ ರಾಜ್ಯದ ಉತ್ತರದಿಂದ ಹಿಡಿದು ದಕ್ಷಿಣದವರೆಗೆ ಭತ್ತದ ಗದ್ದೆಗಳು ಕಾಣಸಿಗುತ್ತವೆ, ಇಂತಹ ಗದ್ದೆಗಳ ಸೌದರ್ಯವನ್ನು ಇಲ್ಲಿ ಸೆರೆಹಿಡಿದು ನೋಡುಗರಿಗೆ ಮತ್ತೊಂದು ಚಿತ್ರ ಬರಹ ಕೊಡಲು ಪ್ರಯತ್ನಿಸಿದ್ದೇನೆ.
ಬರವಣಿಗೆಯ ಮಧ್ಯೆ ನೆನಪಿಗೆ ಬಂದ " ಡೈರೆಕ್ಟರ್ ಸ್ಪೆಷಲ್ " ಚಿತ್ರದ ಒಂದು ಡೈಲಾಗ್.
ಅನ್ನ ಎಲ್ಲಿಯದೋ ಭತ್ತ ಎಲ್ಲಿಯದೋ, ಎತ್ತಲಿನ ನೀರೋ ಎತ್ತಲಿನ ಗೊಬ್ಬರವೂ, ಯಾರ್ಯಾರ ದುಡಿಮೆಯ ಫಲವೋ ಊಟ ನಮ್ಮದಾಗಲು, ಋಣವೆಂಬುದು ಕಣ್ಣಿಗೆ ಕಾಣದ ಗುಪ್ತಗಾಮಿನಿ.
ಕರ್ನಾಟಕ ಕಲ್ಪವೃಕ್ಷ ಕನ್ನಡ ಕಾಮದೇನು ಎನ್ನುವುದು ಸತ್ಯವಾದ ಮಾತು.
|
Joida, Uttara kannada |
|
Joida, Uttara kannada |
|
Magodu, Nandolli, Uttara Kannada |
|
Bairapura, Mudigere, Chikmagalur |
|
Gaddeya madyada haadi, hosakere, mudigere, Chikmagalur |
|
Tinai Ghat, Uttara Kannada |
|
Tinai Ghat, Uttara Kannada |
|
Hindlumane, kodachadri, Shivamogga |
|
kodachadri, Hosanagara, Shivamogga |
|
Hindlumane, kodachadri, Shivamogga |
|
Hindlumane, kodachadri, Shivamogga |
|
Hindlumane, kodachadri, Shivamogga |
|
Hindlumane, kodachadri, Shivamogga |
|
Hindlumane, kodachadri, Shivamogga |
|
Hindlumane, kodachadri, Shivamogga |
|
KRS Mysore |
|
KRS Mysore |
|
Kigga, Shringeri, Chikkamagalur |
|
KRS Mysore |
|
Maddur, Mandya |
|
Sakleshpura, Hassan |
|
Near Yagachi Dam Belur, Hassan |
To be continued with the future pictures...................