Pages

Saturday 27 February 2016

ಬೈಲಹಳ್ಳಿ ಜನಾರ್ಧನ ಸ್ವಾಮಿ ದೇವಸ್ಥಾನ, ಹಾಸನ

ಹಾಸನದಿಂದ ಮಂಗಳೂರಿನ ಕಡೆಗೆ ೬ ಕಿಮೀ ಸಾಗಿದರೆ ಸಿಗುವುದು ಕಂದಲಿ ಗ್ರಾಮ, ಹೆದ್ದಾರಿಯ ಬಲಬದಿಯಲ್ಲಿ ಕಾಣಸಿಗುವುದು ಬೈಲಹಳ್ಳಿ ಕ್ಷೇತ್ರದ ಸ್ವಾಗತ ಕಮಾನು  " ಭೂ ವೈಕುಂಟ ಜನಾರ್ಧನ ಸ್ವಾಮಿ ಕ್ಷೇತ್ರಕ್ಕೆ ಸ್ವಾಗತ "  ಭೂ ವೈಕುಂಟ ಎಂದೇ ಪ್ರಸಿದ್ದವಾಗಿರುವ ಬೈಲಹಳ್ಳಿ ಜನಾರ್ಧನ ಸ್ವಾಮಿ ದೇವಸ್ಥಾನ ವಿಸ್ಮಯಗಳ ಆಲಯ, ಮಹಾವಿಷ್ಣುವಿನ ಅವತಾರವಾದ ಜನಾರ್ದನನ ಈ ಸನ್ನಿದಿ ನಿರಂತರವಾಗಿ ತೊಳೆಯುತ್ತಿದೆ ಮನುಕುಲದ ಪಾಪಗಳ ಕೊಳೆಯನ್ನು. ನೋಡಲು ಸಾಮಾನ್ಯವಾದ ಈ ದೇವಾಲಯ ಉಹಿಸಲಾಗದಷ್ಟು ಕೇಂದ್ರಿಕರಿಸಿದೆ ಪರಮಾತ್ಮಾನೆಂಬ ಅಕಂಡತ್ವದ ತತ್ವ, ಯಾವ ದೈವತ್ವದ ಆಶಿರ್ವಾದವೋ ಅಥವಾ ದೈವ ರೂಪದ ಮಾನವ ಲೀಲೆಯೋ, ದರ್ಶನ ಮುಗಿದು ಹೊರಬಂದರೆ ಒಂದು ಪರಿಪೂರ್ಣ ಭಾವ ಆವರಿಸಿಕೊಳ್ಳುತ್ತದೆ.
ಒಂದೆಡೆ ಜ್ಞಾನ ಇನ್ನೊಂದೆಡೆ ವಿಜ್ಞಾನ, ವಿಜ್ಞಾನ ಕಾಯಕವಾದರೆ ಜ್ಞಾನ ಕೈಲಾಸ ಅದೇ " ಕಾಯಕವೇ ಕೈಲಾಸ " ಕಾಯಕ ಮಾಡುವಾಗ ಸರಿ ತಪ್ಪುಗಳ ವಿಶ್ಲೇಷಣೆ ಎಷ್ಟೋ ಬಾರಿ ಲೆಕ್ಕ ತಪ್ಪುತ್ತದೆ ಆ ತಪ್ಪುಗಳ ಕೊಳೆಯನ್ನು ತೊಳೆಯುವ ಏಕೈಕ ದಾರಿ ಆತ್ಮ ಶುದ್ದಿ, ಅದಾಗಬೇಕಾದರೆ ಇಂದ್ರಿಯಗಳು, ಮನಸ್ಸು, ಮತ್ತು ಬುದ್ದಿ ಶುದ್ದವಾಗಬೇಕು, ಇದಾಗಬೇಕು ಎಂದರೆ ನಾನು ಎನ್ನುವುದು ಮರೆಯಬೇಕು, ಪರಮಾತ್ಮನನ್ನು ನಿರಂತರ ಸೇವಿಸಬೇಕು (ಧ್ಯಾನ) ಪರಮಾತ್ಮನ ದರ್ಶನದಿಂದ ಗುಣಾತ್ಮಕ ಶಕ್ತಿಗಳು ಆವರಿಸುವುದು. ಪರಮಾತ್ಮನ ದರ್ಶನದಿಂದ ಎಲ್ಲ ಪಾಪಗಳು ಭಸ್ಮ ಮತ್ತೆ ಮತ್ತೊಂದು ಹೊಸ ಬದುಕಿನ ನೀರೀಕ್ಷೆ. ಬಹುತೇಕ ದೇವಸ್ಥಾನಗಳಲ್ಲಿ ಪರಮಾತ್ಮನ ಅಕಂಡತ್ವದ ಶಕ್ತಿ ಹೊರಹೊಮ್ಮುವುದು ನಿಜ ಇದೆ ಶಕ್ತಿ ಪರಮಾತ್ಮನ ದರ್ಶನ ಪಡೆದ ಎಲ್ಲಾ ಭಕ್ತರನ್ನು ಪಾಪಮುಕ್ತವಾಗಿಸುತ್ತದೆ. ಒಟ್ಟಿನಲ್ಲಿ ಮನುಷ್ಯ ಜೀವನದಲ್ಲಿ ಅನ್ನ ನೀರು ಹೇಗೆ ನಿರಂತರವೋ ಹಾಗೆ ಆತ್ಮ ಸಂತೋಷ ಕೊಡುವ ಪರಮಾತ್ಮನ ಧ್ಯಾನ ಕೂಡ ಅಷ್ಟೇ ನಿರಂತರ. ಪರಮಾತ್ಮ ಕಣ್ಣಿಗೆ ಕಾಣದಷ್ಟು ನಿಗೂಡ ಮನಸ್ಸಿಗೆ ಕಾಣಿಸುವಷ್ಟು ಗೋಚರ.

Bylahalli temple

Inside photography is prohibited.

Temple Street

Brhamanara Beedi

Old houses

A lot more you will see

Gramada devasthana

Pond near by Bylahalli
Nearby Paddy Fields

Hassan Rural life

Doddakanagalu School

On the other-side

Cattle grazing

Same one more

Rest for sometime

Summer with cloudy atmosphere

Near Bylahalli

Going to home

huge paddy growing fields
Pano