Pages

Wednesday 1 February 2017

ಇನಾಂ ಬಿಸಗ್ನಿ ಮಠ, ಚಿಕ್ಕಮಗಳೂರು, ಪುಟ್ಟಣ್ಣ ಕಂಡ ಕರುನಾಡು

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಸಾಹಿತ್ಯವನ್ನು ಚಿತ್ರವಾಗಿಸಿ ಸಮಾಜದ ಕೊನೆಯ ವ್ಯಕ್ತಿಗೂ ಸಾಹಿತ್ಯ ತಲುಪಿಸಿದ ಅದ್ಭುತ ಕೆಲಸ ಅದು. ಅವರ ಎಲ್ಲಾ ಚಿತ್ರಗಳು ಕನ್ನಡ ನಾಡು ಕಟ್ಟಿದ ಚಿತ್ರಗಳೆನ್ನಬಹುದು, "ಅಮೃತಘಳಿಗೆ" ಚಿತ್ರ ಶಿವಮೊಗ್ಗ ಮತ್ತು ಉತ್ತರ ಕನ್ನಡದ ಮಲೆನಾಡನ್ನು ಬೆಸೆದ ಸಿನಿಮಾ, "ಧರಣಿಮಂಡಲ ಮಧ್ಯದೊಳಗೆ" ಧಾಂಡೆಲಿ, ಬೆಳಗಾವಿ, ಧಾರವಾಡ ಭಾಗವನ್ನು ಬೆಸೆಯಿತು, "ಮಾನಸ ಸರೋವರ" ಬಳ್ಳಾರಿ ಮತ್ತು ಕರ್ನಾಟಕದ ಉತ್ತರ ಭಾಗವನ್ನು ಬೆಸೆಯಿತು, "ಶುಭ ಮಂಗಳ" ಕರಾವಳಿ ಭಾಗವನ್ನು, "ನಾಗರಹಾವು" ದುರ್ಗದ ಸೀಮೆಯನ್ನು, "ಪಡುವಾರಳ್ಳಿ ಪಾಂಡವರು" ಮೈಸೂರು ಭಾಗವನ್ನು ಹಿಡಿದಿಟ್ಟ ಸಿನೆಮಾ, ಎಲ್ಲಾ ಸಿನಿಮಾಗಳು ಒಂದೊಂದು ಭಾಗದ ಪ್ರಕೃತಿ ಮತ್ತದರ ನಾಗರಿಕತೆಯ ಚೌಕಟ್ಟನ್ನು ಹಿಡಿದಿಟ್ಟ ಅದ್ಭುತ ಚಿತ್ರಗಳು. ಅಮೃತಘಳಿಗೆ ಸಿನಿಮಾ ತೆಗೆದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸುತ್ತ.
ಪಡುವಾರಳ್ಳಿ ಪಾಂಡವರು ಚಿತ್ರೀಕರಣವಾಗಿದ್ದು ಬೆಂಬಳೂರಿನಲ್ಲಿ ಅದು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸುತ್ತ ಮುತ್ತ ಅದು ಸೋಮವಾರಪೇಟೆಗಿಂತಲೂ ಸಕಲೇಶಪುರಕ್ಕೆ ಸಮೀಪ, ಇನ್ನೂ ಬೆಂಬಳೂರು ನಟ ಜೈಜಗದೀಶರ ತವರೂರು ಹೌದು. ಇದೆ ಚಿತ್ರದಲ್ಲಿ ಬರುವ ಮಠ ಇರುವುದು ಚಿಕ್ಕಮಗಳೂರು ಜಿಲ್ಲೆ ಸಮೀಪ ದತ್ತಪೀಠ ದಾರಿಯಲ್ಲಿ ಇರುವ " ಇನಾಂ ಬಿಸಗ್ನಿ ಮಠ " ಬಹಳ ದಿನದಿಂದ ನನ್ನನ್ನು ಕಾತರದಿಂದಿರಿಸಿದ ಮತ್ತು ಹೋಗಲೇಬೇಕೆಂದ ಸ್ಥಳ ಇದು, ಅಂತೂ ಮಠಕ್ಕೆ ಹೊರೆಟೆವು, ದತ್ತಪೀಠಕ್ಕೆ ಹೋಗುವಾಗ ಕವಲೊಡೆಯುವ ಎಡಗಡೆಯ ದಾರಿಯನ್ನು ಹಿಡಿದು ಸಾಗಿದರೆ ಬಿಸಗ್ನಿ ಮಠ ಕಮಾನು ಕಾಣಸಿಗುವುದು, ಎಸ್ಟೇಟ್ ದಾರಿಯಲ್ಲಿ ತುಸು ದೂರ ನೆಡೆದರೆ ಸ್ವಾಗತಿಸುವುದು ಅದೇ ಮಠದ ಮುಂದಿರುವ ಮರ, ಮರುಕಳಿಸುವುದು ಅದೇ ಮುಸುರಿ ಕೃಷ್ಣಮೂರ್ತಿ ಡೈಲಾಗು.
" ಕಡುಸ್ಬುಡಿ ಈ ಮರವ ಬೇಜಾನ್ ಹಲ್ಗೆ ಆಗೋಯ್ತದೆ "
ಮಠ ಮುಜರಾಯಿ ಇಲಾಖೆಗೆ ಒಳಪಟ್ಟಿದೆ, ಸಿದ್ದೇಶ್ವರ ಸ್ವಾಮಿ ದೇಗುಲ ಅದೇ ಹಂಚಿನ ಕಟ್ಟಡದಲ್ಲಿದೆ, ಒಂದು ಕುಟುಂಬ ಇಲ್ಲಿ ವಾಸವಿದ್ದು ದೇವಾಲಯದ ಉಸ್ತುವಾರಿ ವಹಿಸಿದೆ, ಮತ್ತೊಂದು ಹೆಂಚಿನ ಕಟ್ಟಡ ನವೀಕರಣಗೊಳ್ಳುತ್ತಿದೆ. ಒಟ್ಟಾರೆ ಜಾಗತೀಕರಣದ ಈ ದಿನದಲ್ಲಿ ಇನ್ನೂ ಪ್ರಕೃತಿಯ ಸೊಬಗು ಅದೇ ಕನ್ನಡದ ಸಂಸ್ಕೃತಿ ಬಿಂಬದಂತಿರುವ ಈ ಸ್ಥಳವನ್ನು ಇಡೀ ಕನ್ನಡಿಗರಿಗೆ ತೋರಿಸಿ ಕನ್ನಡದ ಕಂಪನ್ನು ಪಸರಿಸಿದ ಪುಟ್ಟಣ್ಣ ಕಣಗಾಲರಿಗೆ ನಮೋ ನಮಃ.



Bisagni Mutt

Welcome arch of Inam Bisagni Mutt

Coffee day estates

Bisagni Mutt road

Chikmagalur estates

Nature wonder

Chikmagalur

Coffee day

Karnataka Coffee estates

Lonely Path

Bisagni Mutt

Chikmagalur mutt

Paduvaralli Pandavaru
Bisagni Mutt

Around the temple


Chikmagalur Mata

Paduvaralli pandavaru mata

Searching the rare places

Sri Siddeshwara swamy temple, Inam bisagni mutt Chikmagalur

Bisagni Mutt

Location of Paduvaralli Pandavaru

Rarely exposure to city, no fun with internet still they are happy !

Information of the temple

Completing on all angles

Bisagni Mutt

Siddeshwara temple

Siddeshwara temple



Nearby Landscape
ಯೋಗಿ ನೆಟ್ಟ ಹಲಸಿನ ಮರ

everyone seeing the tree which they had imagination of puttanna Cinema

ಯೋಗಿಯ ಸ್ಥಳ

Renovating house

Closeup

Nearby House

Bisagni Mutt

Seen nearby building

People use to visit but lack of info..



Wall to avoid sliding

Dattapeeta belt

Chandradrona mountains

It seems Investments are really not from the productivity !

Lot of leeches around !

This is my selection to portray the chikmagalur

Opposite side

Good bye !

Going to Mahal

People still dependent on forest to reduce the cost of living

Mahal

Attigundi

Chikmagalur seen from attigundi