Pages

Wednesday, 6 August 2014

ಕವಿಶೈಲ ಕುಪ್ಪಳ್ಳಿ, kavishaila Kuppalli, Theerthahalli Taluk, Shimoga, Karnataka

ಕವಿಶೈಲ

ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು,
ಕಲಾವಂಥನಿಗೆ ಅದು ಸಗ್ಗವೀಡು.
                                         -ಕುವೆಂಪು.

ಮನದಲ್ಲಿ ಅದೊಂದು ಆಸೆ ನನ್ನದೊಂದು ಸ್ವಂತ ಮನೆ ಇರಬೇಕು ಎನ್ನುವುದು, ಅದು ಬದುಕನ್ನು ಕಟ್ಟಿಕೊಳ್ಳುವ ಯುವಕ ಯುವತಿಯರ ಮಹತ್ವಾಕಾಂಕ್ಷೆ, " ಪುಟ್ಟದೊಂದು ಮನೆಇರಲಿ, ಮನೆಮುಂದೊಂದು ಕಾರಿರಲಿ, ವೆಚ್ಚ ಭರಿಸಲು ಬಾಡಿಗೆ ಬರಲಿ, ಬೆಳೆಸಿದ ಹಿರಿಯರು ಬೆರೆಇರಲಿ " ಆಶ್ಚರ್ಯವೆಂದರೂ ಇದು ಇಂದಿನ ಒತ್ತಡದ ಬದುಕಿನ ಕಟು ಸತ್ಯ, ಕೇವಲ ಯುವ ಜನತೆಯನ್ನು ಮಾತ್ರ ಟೀಕಿಸುವುದು ಸಲ್ಲ, ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ.
ಕುವೆಂಪುರವರ ಕುಪ್ಪಳಿಯ ಮನೆಯ ಸುತ್ತ ಹೊರಟ ನಮ್ಮ ತಲೆಯ ಹೊಕ್ಕ ಹಲವಾರು ವಿಚಾರಗಳಲ್ಲಿ ಮೇಲಿನದ್ದು ಕೊಡ ಒಂದು. ಕುಪ್ಪಳ್ಳಿಯಲ್ಲಿ ಹುಟ್ಟಿ ಮೈಸೂರಿನಲ್ಲಿ ನಿಂತು ಅಖಂಡ ವಿಶ್ವಕ್ಕೆ ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪುರವರ ಮನೆ ಇಂದು ಪ್ರವಸಿತಾಣ. ಅತ್ಯುತ್ತಮ ಕೃತಿಗಳನ್ನು ಕೊಟ್ಟು, ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು, ಬದುಕಿನ ಅರ್ಥವನ್ನು ತಿಳಿಸಿಕೊಟ್ಟು ಅಮರರಾದ ಕವಿ ಕುವೆಂಪುರವರ ಮನೆ ಇಂದಿನ ಆದುನಿಕ ಮನೆ ತರಹದ ಫಾಸ್ಟ್ ಫುಡ್ ನಂತೆ ಅಲ್ಲ. ಕವಿ ಮನೆಯ ಅಡುಗೆ ಮನೆ, ಸ್ನಾನದ ಕೋಣೆಯಿಂದ ಹಿಡಿದು ಮಲಗುವ ಕೋಣೆಯ ತನಕ ಎಲ್ಲೆಲ್ಲೂ ಎಲ್ಲವೂ ಸತ್ವ ಭರಿತ ವೈಶಿಷ್ಟವುಳ್ಳ ವಸ್ತುಗಳು, ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಹಾಗೆ ನನ್ನ ಹುಟ್ಟು ಅರ್ಥಾತ್ ಅದು ನನ್ನ ಅಜ್ಜಿ ನನ್ನನ್ನು ತಯಾರಿಸಿದಳು ಎಂದು. ಅದಕ್ಕೆ ಮೇಲೆ ನಾನು ಹೇಳಿದ್ದು " ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ " ಎಂದು. ಕುವೆಂಪು ಉಪಯೋಗಿಸಿದ ವಸ್ತುಗಳು ಅವರ ಎಲ್ಲಾ ಡಾಕ್ಟರೇಟ್ ಪದವಿಗಳು, ಅವರ ಮಧುವೆಯ ಕರೆಯೋಲೆ, ತುಂಬು  ಕುಟುಂಬದ ಚಿತ್ರಗಳು, ಕುಲಪತಿಯಾಗಿ ಕುವೆಂಪು, ಅಜ್ಜನಾಗಿ ಕುವೆಂಪು ಹೀಗೆ ಹಲವು ಬಗೆಯ ವಿಚಾರಗಳು ನಮಗೆ ನೋಡ ಸಿಗುತ್ತವೆ. ಇನ್ನು ಕಲಾನಿಕೆತನದಲ್ಲಿ ಪೂರ್ಣ ಚಂದ್ರ ತೇಜಸ್ವಿಯವರ ಛಾಯಾಚಿತ್ರಗಳು ಗಮನಸೆಳೆಯುತ್ತವೆ. ಇತ್ತೀಚಿನ ರಾಜಕಾರಿಣಿಗಳ ಹಾಗೆ ಬಹುಶಃ ಕುವೆಂಪು ಆಸ್ತಿ ಮಾಡಲು ಹೊರಟಿದ್ದರೆ ಇವೆಲ್ಲವೂ ನಮಗೆ ನೋಡ ಸಿಗುತ್ತಿರಲ್ಲಿಲ್ಲವೇನೂ, ಅಕ್ಷರಸಹ ತಮ್ಮ ಬದುಕನ್ನೇ ಕವನವಾಗಿಸಿ ರಸದೌತಣ ಬಡಿಸಿದ ರಸಋಷಿಗೆ ನನ್ನ ನಮನ.

ನನ್ನ ಕ್ಯಾಮರ ಕಣ್ಣಲ್ಲಿ ಕಂಡ ಕವಿಶೈಲ.

Way to Kavishaila

Poornachandra Tejaswi Monument

One more angle

Kavi mane

Kuvempu Bhavan

Kalanikethana Tejaswi photography

kuppalli house

kuppalli Kuvempu house

kuppalli house

Kavishaila

About kuppalli house

kavishaila

Way to kuvempu's favorite place

Artefacts by Shivaprasad

Kuvempu Kavishaila

kuppalli house

way to kuppalli View point

Kavi samadhi

Kuvempu for ever

From Kuvempu

Written by Kuvempu

kuppalli house a panorama
Kuppalli Mane

kuppalli View Point
 
Final Shot at kuppalli

11 comments:

  1. Sharath tumba mana muttuwante chikkadagi chokkawagi e baravanige moolaka vodugarige maarmikawagi badukina artha tilisikottiddira. Nimma pata galantu vandankinta innondu adhbootha...

    ReplyDelete
  2. ಬಹಳ ಚನ್ನಾಗಿದೆ. ಮನಮೋಹಕ ಚಿತ್ರಗಳು ಕವಿಶೈಲವನ್ನು ಕಣ್ಣ ಮುಂದೆ ತಂದಹಾಗಿದೆ.

    ReplyDelete
    Replies
    1. ಕವಿಶೈಲದ ಬರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಕ್ಕೆಧನ್ಯವಾದಗಳು. :-)

      Delete
  3. hai sir naan ee photo ganalla save maadi kolluttene

    ReplyDelete
  4. ಸಾರ್ ಕವಿಶೈಲದಲ್ಲಿ ಉಳಿದು ಕೊಳ್ಳಕೆ ವ್ಯವಸ್ಥೆ ಇದೆಯೇ ರಾತ್ರಿ ಅಲ್ಲೇ ಇರಬೇಕು ಅಂದರೆ.ಇದ್ದರೆ ದಯವಿಟ್ಟು ಪೋನ್ ನಂಬರ್ ಕೊಡಿ.

    ReplyDelete
    Replies
    1. ತಿಳಿದ ಮಾಹಿತಿ ಪ್ರಕಾರ ಅಲ್ಲಿ ಉಳಿಯುವ ವ್ಯವಸ್ತೆ ಇಲ್ಲ, ಅದು ತೀರ್ಥಹಳ್ಳಿಯಿಂದ 20 ಕಿಮೀ ದೂರ ಮಾತ್ರ.

      Delete
    2. Kavishailadalli neevu raatri ulidukolla bahudu. Alli yeradu taraha vyavasthe ide, vandu individual room haageye vandu dodda dormetary. Number nanna kade illa, but you can go there and avail the services.

      Delete
    3. Most welcome. For more places in Namma Karunaadu you can visit my page www.alemaaari.blogspot.in

      Delete