Pages

Saturday, 27 June 2015

ಮೂಲೆಯಲ್ಲಿದ್ದ ಕೃತಿಗಳ ಮೇಲೆ ಒಂದು ಬರಹ

ಇತ್ತೀಚಿಗೆ ನನಗೆ ಕನ್ನಡದ ಕೆಲ ಪೌರಾಣಿಕ ಕೃತಿಗಳು ಸಿಕ್ಕಿದವು , ಅದನ್ನು PDF ಮಾದರಿಯಲ್ಲಿ online ಓದುಗರಿಗೆ ಕೊಡಬೆಕೆನ್ನಿಸಿತು, ಈ ಕೆಳಗಿನ ಕೃತಿಗಳು PDF ನಲ್ಲಿದೆ ಅದನ್ನು ಡೌನ್ಲೋಡ್ ಮಾಡಬಹುದು. 

ಶಿವಮಹಾಪುರಾಣದ ಎಲ್ಲಾ ಏಳು ಸಂಹಿತೆಗಳು ಇಲ್ಲಿವೆ. ರುದ್ರಸಂಹಿತೆಯಲ್ಲಿ ಐದು ಭಾಗಗಳಿವೆ, ವಾಯುವೀಯ ಸಂಹಿತೆಯಲ್ಲಿ ಎರಡು ಭಾಗಗಳಿವೆ.

ಶಿವಮಹಾಪುರಾಣ : ವಿದ್ಯೇಶ್ವರಸಂಹಿತ
ಶಿವಮಹಾಪುರಾಣ : ರುದ್ರಸಂಹಿತ - ಸೃಷ್ಟಿ ಖಂಡ
ಶಿವಮಹಾಪುರಾಣ : ರುದ್ರಸಂಹಿತ - ಪಾರ್ವತಿ ಖಂಡ
ಶಿವಮಹಾಪುರಾಣ : ರುದ್ರಸಂಹಿತ - ಕುಮಾರ ಖಂಡ
ಶಿವಮಹಾಪುರಾಣ : ರುದ್ರಸಂಹಿತ - ಯುದ್ದ ಖಂಡ
ಶಿವಮಹಾಪುರಾಣ : ರುದ್ರಸಂಹಿತ - ಸತೀ ಖಂಡ
ಶಿವಮಹಾಪುರಾಣ : ಶತರುದ್ರಸಂಹಿತ
ಶಿವಮಹಾಪುರಾಣ : ಕೋಟಿರುದ್ರಸಂಹಿತ
ಶಿವಮಹಾಪುರಾಣ : ಉಮಾಸಂಹಿತ
ಶಿವಮಹಾಪುರಾಣ : ಕೈಲಾಸಸಂಹಿತ
ಶಿವಮಹಾಪುರಾಣ : ವಾಯುವೀಯಸಂಹಿತೆಯ ಪೂರ್ವಭಾಗ
ಶಿವಮಹಾಪುರಾಣ : ವಾಯುವೀಯಸಂಹಿತೆಯ ಉತ್ತರಭಾಗ


ಈಶವಾಸ್ಯೊಪನಿಶತ್

Shiva

ಈ ಶಿವ ಮಹಾಪುರಾಣ ಕೃತಿಯನ್ನು ಬರೆದದ್ದು ಹಾಸನದ ಪಂಡಿತ ವೆಂಕಟ ರಾವ್ ರವರು, ಇವರು ಮೈಸೂರು ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು, ಕೃತಿಯನ್ನು ಪ್ರಕಟಿಸಿದ್ದು ಶ್ರೀ ಚಾಮುಂಡೇಶ್ವರಿ ಎಲೆಕ್ಟ್ರಿಕಲ್ ಪ್ರೆಸ್ ಮೈಸೂರು. ಕೃತಿಯೇ ಹೇಳುವಂತೆ ಇವರು ಬದುಕಿದ ಅವದಿ ಅದು ಸ್ವಾತಂತ್ರ ಪೂರ್ವದಲ್ಲಿ 1945. ಬಹುಶಃ ನಾನು ಸೇರಿ ಈ ಹೆಸರು ಎಷ್ಟು ಜನ ತಾನೇ ಕೇಳಿದ್ದಾರು, ಇಂಥಹ ಪಂಡಿತ ರತ್ನವನ್ನು ಮತ್ತು ಅವರು ಬರೆದ ಕೃತಿಗಳನ್ನು ಕಡೇಪಕ್ಷ ನೆನೆಯುವುದೇ ಒಂದು ಭಾಗ್ಯ. ಕಾಲಗರ್ಭದಲ್ಲಿ ಎಲ್ಲವೂ ಕೂಡ ಮಾಸುತ್ತದೆ ಆದರೆ ನಾವು ಕೊಡಮಾಡುವ ಮೌಲ್ಯಗಳು ಮತ್ತು ಸಾತ್ವಿಕ ಗುಣಗಳು ನಮ್ಮನ್ನು ಮತ್ತೆ ಪ್ರಜ್ನಾವಂಥರ ಹಾಗು ಸುಸಂಸ್ಕೃತರ ಮದ್ಯೆ ಮತ್ತೆ ಮತ್ತೆ  ಹುಟ್ಟಿಸುತ್ತವೆ. 
ಈಶವಾಸ್ಯೊಪನಿಶತ್ ಕೃತಿಯನ್ನು ಬರೆದವರು  ಶ್ರೀ ಯದುಗಿರಿ ಸಂಪತ್ಕುಮಾರ ರಾಮಾನುಜ ಜೀಯರ್ ಸ್ವಾಮಿಗಳು. ಈ ಕೃತಿ ಪ್ರಕಟವಾಗಿದ್ದು 1956 ರಲ್ಲಿ ಅದು ಆಗ 6 ಆಣೆಗಳು ಮಾತ್ರ, ಆದರೆ ಅದು ಇಂದಿಗೆ ಯಾರಿಗೂ ತಿಳಿಯದು.
ಸತ್ಯ ಎಂದಿಗೂ ನಿತ್ಯ ಆದರೆ ಸತ್ಯವನ್ನು ನಂಬಿ ಬದುಕುವುದು ಕಹಿಯಂತೆಯೇ ಕಷ್ಟ,
ಪ್ರತಿಯೊಂದು ಗಳಿಗೆಯೂ ಇತಿಹಾಸ, ಇದರ ಪ್ರಜ್ಞೆ ಭಗವಂತ ಆದರೆ ಆತನದು ಪರಮ ಪ್ರಜ್ಞೆ. ಸತ್ಯ ಎಂದೂ ಸುಳ್ಳಗುವುದಿಲ್ಲ ಹಾಗೆ ಸುಳ್ಳು ಸತ್ಯವಾಗುವುದಿಲ್ಲ, ಯಾವುದೇ ಧರ್ಮವಿರಲಿ ಅಲ್ಲಿಯ ಆರಾಧನೆ ಪರಮಪ್ರಜ್ನೆಗೆ ಮಾತ್ರ. ಮನುಷ್ಯ ತನ್ನ ಪ್ರಜ್ಞೆಯಲ್ಲಿ ತಪ್ಪು ಮಾಡಬಹುದು ಏಕೆಂದರೆ ಮನುಷ್ಯನಿಗೆ ತನ್ನ ಪ್ರಜ್ಞೆಯ ಬಗ್ಗೆ ಮಾತ್ರ ಅರಿವಿರುತ್ತದೆ ಆದರೆ ಭಗವಂತನಿಗೆ ಎಲ್ಲ ಜೀವಿಗಳ ಪ್ರಜ್ಞೆಯ ಅರಿವಿರುತ್ತದೆ ಅದಕ್ಕೆ ಭಗವಂತನದ್ದು ಪರಮಪ್ರಜ್ಞೆ, ಇದನ್ನು ಭಗವದ್ಗೀತೆ, ಭಾಗವತ ಹಾಗೂ ಇಲ್ಲಿರುವ ಈ ಎರಡೂ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ.
ಬದುಕು ನಿರಂತರ, ಈ ನಿರಂತರ ಬದುಕಿನಲ್ಲಿ ನಮ್ಮ ನಿರಂತರ ಸೇವೆಯೆಲ್ಲವನ್ನು ಆ ಈಶ್ವರನಿಗೆ ಸಲ್ಲಿಸಬೇಕು. ನಮ್ಮ ಆ ಸೇವೆಗಳು ಹೋಮಕ್ಕೆ ಅರ್ಪಿಸಿದ ಸಮಿತ್ತುಗಳಿದ್ದಂತೆ. ಹೋಮದಲ್ಲಿ ನೀಡಿದ ಎಲ್ಲವೂ ಭೂದಿಯಗುವಂತೆ ನಮ್ಮ ಎಲ್ಲಾ ವಿಹಿತವಾದ ಕರ್ಮಗಳು ಭಗವಂತನ ಮುಂದೆ ಕರ ಮುಗಿದು ನಿಂತಾಗ ಆ ಎಲ್ಲಾ ಕರ್ಮಗಳು ಭೂದಿಯಗುತ್ತವೆ. ಇದೆ ಬದುಕಿನ ಸೂತ್ರ. ಇದೆ ಬಸವೇಶ್ವರರು ಜಗತ್ತಿಗೆ ಸಾರಿದ " ಕಾಯಕವೇ ಕೈಲಾಸ " ಎನ್ನುವ ಶರಣರ ನಾಣ್ಣುಡಿ.

ಭಗವದ್ಗೀತೆಯ ದಿವ್ಯಜ್ಞಾನದ ಒಂದು ಸಾರ
ಧರ್ಮಂತು ಸಾಕ್ಷಾದ್ ಭಗವತ್ಪ್ರಣೀತಮ್ : ಧರ್ಮವು ಸಾಕ್ಷಾತ್ ಭಗವಂತನ ಆಜ್ಞೆ ಆಗಿರುತ್ತದೆ.
ಪ್ರಾರಂಭದಲ್ಲಿ ಮನುಷ್ಯನಿಗೆ ಆತ್ಮಸಾಕ್ಷಾತ್ಕಾರದ ಕಿಂಚಿತ್ ಹಂಬಲ ಇರಬೇಕು. ಇದು ಆತನನ್ನು ಆಧ್ಯಾತ್ಮಿಕವಾಗಿ ಉನ್ನತಿ ಪಡೆದವರ ಸಹವಾಸವನ್ನು ಪಡೆಯಲು ಪ್ರಯತ್ನಿಸುವ ಹಂತಕ್ಕೆ ತರುತ್ತದೆ. ಮುಂದಿನ ಹಂತದಲ್ಲಿ ಆತನು ಉನ್ನತಿಗೇರಿದ ಗುರುವಿನಿಂದ (ಪರಮಾತ್ಮನಿಂದ) ದೀಕ್ಷೆ ಪಡೆಯುತ್ತಾನೆ. ಅವನ ಮಾರ್ಗದರ್ಶನದಲ್ಲಿ ದೀಕ್ಷೆ ಪಡೆದ ಶಿಷ್ಯನು ಭಕ್ತಿಸೇವೆಯನ್ನು ಪ್ರಾರಂಭಿಸುತ್ತಾನೆ. ಈ ಭಕ್ತಿಸೇವೆಯಲ್ಲಿ ಮನುಷ್ಯನು ಎಲ್ಲ ಐಹಿಕ ಮೋಹದಿಂದ ಮುಕ್ತನಾಗುತ್ತಾನೆ. ಅತ್ಮಸಾಕ್ಷಾತ್ಕಾರದಲ್ಲಿ ದೃಡತೆಯನ್ನು ಪಡೆಯುತ್ತಾನೆ ಮತ್ತು ದೇವೋತ್ತಮ ಪರಮಪುರುಷನಾದ ಶ್ರೀಕೃಷ್ಣನ ವಿಷಯವನ್ನು ಕೇಳಬೇಕೆಂಬ ಅಭಿರುಚಿ ಹೊಂದುತ್ತಾನೆ. ಈ ಅಭಿರುಚಿಯು ಕ್ರಷ್ಣಪ್ರಜ್ನೆಯಲ್ಲಿ ಆಸಕ್ತಿಯನ್ನುoಟುಮಡುತ್ತದೆ. ಇಂತಹ ಆಸಕ್ತಿಯು ಭಾವದಲ್ಲಿ ಎಂದರೆ ಭಗವಂತನಲ್ಲಿ ಅಲೌಕಿಕ ಪ್ರೇಮದ ಪ್ರಾರಂಭದ ಹಂತದಲ್ಲಿ ಪರಿಣಮಿಸುತ್ತದೆ. ಭಗವಂತನಲ್ಲಿ ನಿಜವಾದ ಪ್ರೀತಿಗೆ "ಪ್ರೇಮ" ಎಂದು ಹೆಸರು, ಇದು ಬದುಕಿನ ಅತ್ಯುನ್ನತ ಪರಿಪೂರ್ಣ ಸ್ಥಿತಿ. ಪ್ರೇಮದ ಹಂತದಲ್ಲಿ ಭಕ್ತನು ಭಗವಂತನ ದಿವ್ಯ ಭಕ್ತಿಸೇವೆಯಲ್ಲಿ ಸತತವಾಗಿ ತೊಡಗಿರುತ್ತಾನೆ. ಹೀಗೆ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿಸೇವೆಯ ಪ್ರಕ್ರಿಯೆಯಿಂದ ಮನುಷ್ಯನು ಕ್ರಮೇಣ ಅತ್ಯುನ್ನತ ಹಂತಕ್ಕೆ ಏರಬಹುದು. ಆಗ ಆತನು ಎಲ್ಲ ಐಹಿಕ ಮೋಹದಿಂದ, ಆದ್ಯಾತ್ಮಿಕ ವ್ಯಕ್ತಿತ್ವದ ಭಯದಿಂದ ಮತ್ತು ಶೂನ್ಯ ತತ್ವದಲ್ಲಿ ಕೊನೆಗೊಳ್ಳುವ ಹತಾಶೆಯಿಂದ ಬಿಡುಗಡೆಯಾಗಬಹುದು. ಕಟ್ಟಕಡೆಗೆ ಭಗವಂತನ ನಿವಾಸವನ್ನು ಸೇರಬಹುದು.  

ಮೇಲೆ ಹೇಳಿರುವ ಯಾವ ವಾಕ್ಯವೂ ವೈಯಕ್ತಿಕ ಅಭಿಪ್ರಾಯವಲ್ಲ, ಎಲ್ಲವೂ ಧರ್ಮಗ್ರಂಥಗಳಲ್ಲಿ ಪ್ರಕಟವಾಗಿರುವ ಅನುವಾದಗಳು, ಈ ಕೃತಿಗಳನ್ನು ಹುಡುಕುತ್ತಿರುವ ಹಲವು ಕನ್ನಡ ಪೌರಾಣಿಕ ಸಾಹಿತ್ಯಾಸಕ್ತರು ಮತ್ತು ಆಸ್ತಿಕರಿಗೂ ನನ್ನ ಧನ್ಯವಾದಗಳು. ಇಷ್ಟವಾದರೆ ಲೈಕ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತೊಮ್ಮೆ ಧನ್ಯವಾದಗಳು.


ನಾನು, ನನ್ನಿದಲೇ ಹಾಗೂ ಇದು ಮೂರ್ಖತನ ಎನ್ನುವ ಅಜ್ಞಾನಿಗಳಿಗೆ ಬಹುಶಃ ಇದು ಹಿಡಿಸಲಾರದು ಅದಕ್ಕೆ ನನ್ನ ವಿಶಾದವಿರಲಿ.